Monday 30 August 2021

'SSLC ಪೂರಕ ಪರೀಕ್ಷೆ'ಗೆ ನೋಂದಾಯಿಸಿಕೊಳ್ಳಲು, ಶುಲ್ಕ ಪಾವತಿಗೆ ದಿನಾಂಕ ವಿಸ್ತರಣೆ

 ಬೆಂಗಳೂರು : ಇಂದು ಕೊನೆಗೊಳ್ಳುತ್ತಿದ್ದಂತ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಗೆ ( SSLC Supplementary Examination ) ನೋಂದಾಯಿಸಿ ಕೊಳ್ಳೋ ದಿನಾಂಕವನ್ನು, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ವಿಸ್ತರಣೆ ಮಾಡಿದೆ.

ಈ ಕುರಿತಂತೆ ಸುತ್ತೋಲೆ ಹೊರಡಿಸಿರುವಂತ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು, 2021-22ನೇ ಸಾಲಿನ ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಗೆ ( SSLC Exam ) ಅರ್ಹ ಅಭ್ಯರ್ಥಿಗಳ ಮಾಹಿತಿಯನ್ನು ಆನ್ ಲೈನ್ ಮುಖಾಂತರ ನೋಂದಾಯಿಸಲು ಹಾಗೂ ಶುಲ್ಕ ಪಾವತಿಸಲು ದಿನಾಂಕ 18-08-2021ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು.

ಆದ್ರೇ.. ರಾಜ್ಯದ ಕೆಲವು ಶಾಲೆಗಳಿಂದ ಹಾಗೂ ಪೋಷಕರಿಂದ ಮಂಡಳಿಗೆ ದೂರವಾಣಿಯ ಮುಖಾಂತರ ವಿದ್ಯಾರ್ಥಿಗಳ ನೋಂದಣಿ ಮತ್ತು ಪರೀಕ್ಷಾ ಶುಲ್ಕ ಪಾವತಿಸುವ ದಿನಾಂಕವನ್ನು ವಿಸ್ತರಿಸಲು ಕೋರಿಕೆಗಳು ಬಂದ ಹಿನ್ನಲೆಯಲ್ಲಿ, ವಿದ್ಯಾರ್ಥಿಗಳ ನೋಂದಣಿ, ಪರೀಕ್ಷಾ ಶುಲ್ಕ ಪಾವತಿ ಹಾಗೂ ಪ್ರಸ್ತಾವನೆ ಸಲ್ಲಿಕೆ ದಿನಾಂಕಗಳನ್ನು ಈ ಕೆಳಕಂಡಂತೆ ಅಂತಿಮವಾಗಿ ವಿಸ್ತರಿಸಲಾಗಿದೆ.

ಹೀಗಿದೆ ಎಸ್ ಎಸ್ ಎಲ್ ಸಿ ಪರೀಕ್ಷಾ ನೋಂದಣಿ, ಶುಲ್ಕ ಭರ್ತಿ ವಿಸ್ತರಣೆ ದಿನಾಂಕಗಳು

·         CCERF, CCEPF, CCERR, CCEPR, NSR ಮತ್ತು NSPR ವಿದ್ಯಾರ್ಥಿಗಳ ಮಾಹಿತಿಯನ್ನು ಅಪ್ ಲೋಡ್ ಮಾಡಲು ಈ ಮೊದಲು ದಿನಾಂಕ 30-08-2021ರವರೆಗೆ ನಿಗದಿ ಪಡಿಸಲಾಗಿತ್ತು. ಇದೀಗ ದಿನಾಂಕ 04-09-2021 ಕೊನೆಯ ದಿನಾಂಕವಾಗಿದೆ.

·         CCERF, CCEPF, CCERR, CCEPR, NSR ಮತ್ತು NSPR ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕದ ಚಲನ್ ಮುದ್ರಿಸಿಕೊಳ್ಳಲು ಈ ಮೊದಲು ದಿನಾಂಕ 31-08-2021ರವರೆಗೆ ನಿಗದಿಪಡಿಸಲಾಗಿತ್ತು. ಇದೀಗ ಕೊನೆಯ ದಿನಾಂಕ 06-09-2021 ಆಗಿದೆ.

·         ಚಲನ್ ಮುದ್ರಿಸಿಕೊಂಡು ಬ್ಯಾಂಗ್ ಗೆ ಜಮೆ ಮಾಡಲು ಈ ಹಿಂದೆ 02-09-2021 ಆಗಿತ್ತು, ಈ ದಿನಾಂಕವನ್ನು 08-09-2021ರವರೆಗೆ ವಿಸ್ತರಿಸಿದೆ.

·         2002 ಮತ್ತು ಹಿಂದಿನ ವರ್ಷಗಳ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಪುನರಾವರ್ತಿತ ಅಭ್ಯರ್ಥಿಗಳ ( NSR ಮತ್ತು NSPR ) ಪರೀಕ್ಷಾ ಶುಲ್ಕವನ್ನು ಹಳೆಯ ಪದ್ದತಿಯಂತೆ ಮಂಡಳಿಯ ನೆಫ್ಟ್ ಚಲನ್ ಮೂಲಕ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಪಾವತಿಸಲು ಈ ಹಿಂದೆ 02-09-2021ರವರೆಗೆ ನೀಡಲಾಗಿತ್ತು. ಇದೀಗ ದಿನಾಂಕ 08-09-2021ರವರೆಗೆ ವಿಸ್ತರಣೆ ಮಾಡಲಾಗಿದೆ.


 


No comments:

Post a Comment