ತಿರುವನಂತಪುರ: 'ಕೋವಿಡ್-19 ಹರಡುವುದನ್ನು
ತಡೆಗಟ್ಟಲು ರಾಜ್ಯದಲ್ಲಿ ಮುಂದಿನ ವಾರದಿಂದ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗುವುದು' ಎಂದು ಶನಿವಾರ ಕೇರಳ ಸರ್ಕಾರ ಘೋಷಿಸಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನೇತೃತ್ವದಲ್ಲಿ ನಡೆದ
ಪರಿಶೀಲನಾ ಸಭೆಯಲ್ಲಿ ಮುಂದಿನ ವಾರದಿಂದ ರಾತ್ರಿ 10ರಿಂದ
ಬೆಳಿಗ್ಗೆ 6ಗಂಟೆಯವರೆಗೆ ಕರ್ಫ್ಯೂ ಜಾರಿಗೊಳಿಸಲು ನಿರ್ಣಯ
ಕೈಗೊಳ್ಳಲಾಗಿದೆ.
'ಸೋಂಕಿನ ಅನುಪಾತ ಶೇ 7ಕ್ಕಿಂತ ಹೆಚ್ಚಿರುವ ಪ್ರದೇಶಗಳಲ್ಲಿ ಸರ್ಕಾರವು ಲಾಕ್‌ಡೌನ್ ಕೈಗೊಳ್ಳಲಿದೆ. ಆ. 29ರ (ಭಾನುವಾರ) ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗುವುದು' ಎಂದು
ವಿಜಯನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
Comments
Post a Comment