Sunday, 29 August 2021

ಪೊಷಕರು: ಮಕ್ಕಳ ಪಾಲನೆಯಲ್ಲಿ ತಪ್ಪಿಯೂ ಈ ಐದು ತಪ್ಪು ಮಾಡಬಾರದು.!

 

ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಮೊಟಿವೇಶನ್  ಅತಿ ಮುಖ್ಯ. ಮಕ್ಕಳ ಸಣ್ಣ ಪುಟ್ಟ ವಸ್ತುಗಳು ನಿಮಗೆ ಜೋಕ್ ತರಹ ಅನ್ನಿಸಬಹುದು. ಆದರೆ, ತಿಳಿದುಕೊಳ್ಳಿ ಆ ಸಣ್ಣ ಪುಟ್ಟ ವಸ್ತುವನ್ನು ಮಾಡುವ ಹಿಂದೆ ಮಕ್ಕಳು ಅಪಾರ ಶ್ರಮ ಹಾಕಿದ್ದಿರಬಹುದು.

·         ನೀವು ಮಾಡುವ ಕೆಲವೊಂದು ತಪ್ಪು ಮಕ್ಕಳ ಆತ್ಮವಿಶ್ವಾಸವನ್ನೇ ಚಿವುಟಿ ಬಿಡಬಹುದು.

·         ಹಾಗಾಗಿ ಮಕ್ಕಳ ಪಾಲನೆಯಲ್ಲಿ ಈ ಐದು ತಪ್ಪು ಮಾಡಲೇ ಬಾರದು.

·         ಆ ಐದು ತಪ್ಪು ಯಾವುದು ಎಂಬುದಕ್ಕೆ ಇದನ್ನು ಓದಿ

ಮಕ್ಕಳ ಮನಸ್ಸು ಬಹು ಮುಗ್ದ. ನೀವು ಮಾಡುವ ಕೆಲವೊಂದು ತಪ್ಪು ಮಕ್ಕಳ ಆತ್ಮವಿಶ್ವಾಸವನ್ನೇ ಚಿವುಟಿ ಬಿಡಬಹುದು. ಮಕ್ಕಳ ಆತ್ಮವಿಶ್ವಾಸವೇ ಇಲ್ಲದಂತಾಗಿ, ಘೋರ ಹಿಂಜರಿಕೆ ಅವರನ್ನು ಕಾಡಬಹುದು. ಹಾಗಾಗಿ ಮಕ್ಕಳ ಪಾಲನೆಯಲ್ಲಿ ಈ ಐದು ತಪ್ಪು ಮಾಡಲೇ ಬಾರದು.! ಯಾವುದು ಆ ಐದು ತಪ್ಪು.?

1.     ಮಕ್ಕಳ ಅಪಹಾಸ್ಯ ಮಾಡುವುದು.
ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಮೊಟಿವೇಶನ್ ಅತಿ ಮುಖ್ಯ. ಮಕ್ಕಳ ಸಣ್ಣ ಪುಟ್ಟ ವಸ್ತುಗಳು ನಿಮಗೆ ಜೋಕ್ ತರಹ ಅನ್ನಿಸಬಹುದು. ಆದರೆ, ತಿಳಿದುಕೊಳ್ಳಿ ಆ ಸಣ್ಣ ಪುಟ್ಟ ವಸ್ತುವನ್ನು ಮಾಡುವ ಹಿಂದೆ ಮಕ್ಕಳು ಅಪಾರ ಶ್ರಮ ಹಾಕಿದ್ದಿರಬಹುದು. ಆ ವಸ್ತುಗಳು ನೋಡಲು ಸುಂದರವಾಗಿಲ್ಲದೇ ಹೋಗಬಹುದು. ಅಂಥ ಸನ್ನಿವೇಶದಲ್ಲಿ ಮಕ್ಕಳ  ಅಪಹಾಸ್ಯ ಮಾಡಬಾರದು. ಈ ತಪ್ಪು ಮಾಡಿದರೆ, ಮುಂದೆ ಮಕ್ಕಳು ಪ್ರಯತ್ನಿಸುವ ಪ್ರಯತ್ನವನ್ನೂ ಕೂಡಾ ಕೈಬಿಡಬಹುದು.

2. ಇನ್ನೊಂದು ಮಗುವಿನೊಂದಿಗೆ ತುಲನೆ ಮಾಡುವುದು..!
ಪ್ರತಿಯೊಂದು ಮಗು ಕೂಡಾ ವಿಶೇಷವೇ. ಮಕ್ಕಳನ್ನು ಇನ್ನೊಂದು ಮಗುವಿನೊಂದಿಗೆ ತುಲನೆ   ಮಾಡುವ ಕೆಟ್ಟ ಅಭ್ಯಾಸ ಸಾಕಷ್ಟು ಜನರಲ್ಲಿದೆ. ಇದರಿಂದ ಮಗುವಿನ ಮನಸ್ಸಿನಲ್ಲಿ ಇತರ ಮಕ್ಕಳ ಬಗ್ಗೆ ದ್ವೇಷ ಭಾವನೆ ಮೂಡುವ ಎಲ್ಲಾ ಸಾಧ್ಯತೆಗಳಿರುತ್ತವೆ. ಜೊತೆಗೆ ಮಕ್ಕಳ ಆತ್ಮವಿಶ್ವಾಸವೇ ಖತಂ ಆಗಬಹುದು.

3. ಪ್ರತಿ ಕೆಲಸದಲ್ಲೂ ಲೋಪ ಹುಡುಕುವುದು
ಯಾರೂ ಕೂಡಾ ಪರಿಪೂರ್ಣರಲ್ಲ. ಮಕ್ಕಳಂತೂ ಅಲ್ಲವೇ ಅಲ್ಲ. ಮಕ್ಕಳು ಯಾವುದಾದರೂ ಆಕ್ಟಿವಿಟಿ  ಮಾಡುತ್ತಿದ್ದರೆ ಮಾಡಲು ಬಿಡಿ. ಅವರ ಕೆಲಸಗಳಲ್ಲಿ ಲೋಪ ಹುಡುಕಬೇಡಿ. ಅವರನ್ನು ಪ್ರೋತ್ಸಾಹಿಸಿ.

4. ಇತರರ ಮುಂದೆ ಮಕ್ಕಳ ದೂರು ಹೇಳಬೇಡಿ..
ಬೇರೆಯವರ ಮುಂದೆ ಮಕ್ಕಳ ದೂರು  ಹೇಳಿದರೆ ಅದು ಮಕ್ಕಳ ಮನಸ್ಸಿನ ಮೇಲೆ ಗಾಢ ಪ್ರಭಾವ ಬೀರುತ್ತದೆ. ಮಕ್ಕಳಿಗೆ ಡಿಪ್ರೆಶನ್  ಉಂಟಾಗಬಹುದು. ಆತ್ಮ ವಿಶ್ವಾಸ ಫಿನಿಶ್ ಆಗಿ ಬಿಡುತ್ತದೆ. ಪರರ ಮುಂದೆ ಮಕ್ಕಳ ದೂರು ಹೇಳುವ ಅಭ್ಯಾಸ ಬಿಟ್ಟು ಬಿಡಿ.

5. ಹೊಡೆಯುವುದು ಬಡಿಯುವುದು ಮಾಡಬೇಡಿ.
ಮಕ್ಕಳಿಗೆ ಹೊಡೆದು ಬಡಿದು ಏನೂ ಮಾಡಲು ಸಾಧ್ಯವಿಲ್ಲ. ಮಕ್ಕಳನ್ನು ತಿದ್ದಬೇಕಾದರೆ ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಬುದ್ದಿ ಹೇಳಿ. ಹೊಡೆದು ಬಡಿದು ಮಾಡಿದರೆ ಮಕ್ಕಳಲ್ಲಿ ಭಯ ಹುಟ್ಟಬಹುದು. ಹಠ ಬೆಳೆಯಬಹುದು. ವಿಷಯ ನಿಮ್ಮಿಂದ ಮುಚ್ಚಿಡಲು ಯತ್ನಿಸಬಹುದು. ದ್ವೇಷ ಬೆಳೆಯಬಹುದು. ಇವೆಲ್ಲಾ ಅಪಾಯಕಾರಿ ಅಂಶಗಳು

No comments:

Post a Comment