Monday, 30 August 2021

ಪೈಜರ್ ಕೋವಿಡ್ ಲಸಿಕೆ ಪಡೆದವರಲ್ಲಿ ಹೆಚ್ಚಿದ ಆತಂಕ: ಮಹಿಳೆ ಸಾವು..!

 

ವೆಲ್ಲಿಂಗ್ಟನ್,ಆ.30-ಕೊರೊನಾ ಲಸಿಕೆ ಪಡೆದ ಮಹಿಳೆಯರೊಬ್ಬರು ಸಾವನ್ನಪ್ಪುವ ಮೂಲಕ ನ್ಯೂಜಿಲ್ಯಾಂಡ್‍ನಲ್ಲಿ ನಡೆದಿದೆ. ಪೈಜರ್ ಲಸಿಕೆ ಪಡೆದ ಮಹಿಳೆ ಲಘು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ನ್ಯೂಜಿಲ್ಯಾಂಡ್‍ನಲ್ಲಿ ಸುಮಾರು 20 ವರ್ಷಕ್ಕೂ ಹೆಚ್ಚು ಮಂದಿ ಕೋವಿಡ್ ಲಸಿಕೆ ಪಡೆದಿದ್ದು, ಈಗ ನಾನಾ ರೀತಿಯ ಆತಂಕಗಳು ಉದ್ಭವಿಸಿವೆ. ಮೃತಪಟ್ಟ ಮಹಿಳೆಗೆ ವಿವಿಧ ಆರೋಗ್ಯ ಸಮಸ್ಯೆಗಳು ಇರುವುದಾಗಿ ತಿಳಿದು ಬಂದಿತ್ತು.

ಲಸಿಕೆ ಪಡೆದ ಬಳಿಕ ಆಕೆ ಮೃತಪಟ್ಟಿರುವುದು ಖಚಿತವಾಗಿದೆ ಎಂದು ಆರೋಗ್ಯ ಇಲಾಖೆಯ ಮಹಾನಿರ್ದೇಶಕ ಆಯಸ್ಲೆಬ್ಲ್ಯೂಮ್‍ಫೀಲ್ಡ್ ತಿಳಿಸಿದ್ದಾರೆ. ಈ ನಡುವೆ ಕೋವಿಡ್ ಸೋಂಕು ನಿಯಂತ್ರಿಸಲು ಪ್ರಧಾನಮಂತ್ರಿ ಜಾಸಿಂಡಾ ಆಡ್ರೈನ್ ಎರಡು ವಾರಗಳ ಕಾಲ ಲಾಕ್‍ಡೌನ್ ಮುಂದುವರೆಸಿದ್ದಾರೆ.

No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...