ಬೆಂಗಳೂರು,ಆ.29- ಕೊರೊನಾ
ಮೂರನೇ ಅಲೆ ನಿಯಂತ್ರಣದ ಬಗ್ಗೆ ಎಚ್ಚರಿಕೆ ವಹಿಸಿರುವ ಬಿಬಿಎಂಪಿ ವಾರ್ನಿಂಗ್ ಹಂತಗಳ ಬಗ್ಗೆ
ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.ನಾವೀಗ ಯಾವ ಹಂತದಲ್ಲಿದ್ದೇವೆ. ಎಷ್ಟು ಕೇಸ್‍ಗಳು ದಾಖಲಾದರೆ ಅಪಾಯ, ಯಾವ ಹಂತ ದಾಟಿದ್ರೆ
ಲಾಕ್‍ಡೌನ್ ಮಾಡಬೇಕು ಎಂಬ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ನಗರದಲ್ಲಾದ ಕೊರೊನಾ ಸಾವು-ನೋವಿನ
ಅಂಕಿ ಅಂಶಗಳನ್ನು ವಿಶ್ಲೇಷಿಸಿ ವರದಿ ತಯಾರಿಸಿದ್ದಾರೆ.
ಯಾವ ಸಂದರ್ಭದಲ್ಲಿ ಗ್ರೀನ್ ಅಲರ್ಟ್, ಯೆಲ್ಲೊ ಅಲರ್ಟ್, ಆರೆಂಜ್
ಅಲರ್ಟ್ ಮತ್ತು ರೆಡ್ ಅಲರ್ಟ್ ಜಾರಿ ಮಾಡಬೇಕು ಎಂಬ ಬಗ್ಗೆಯೂ ಸರ್ಕಾರಕ್ಕೆ ವರದಿ
ಸಲ್ಲಿಸಲಾಗಿದೆ.ಕೊರೊನಾ ಮೂರನೇ ಅಲೆ ಸಂದರ್ಭದಲ್ಲಿ ನಗರದ್ಯಾಂತ ಭಾರಿ ಮುನ್ನೆಚ್ಚರಿಕೆ ವಹಿಸಬೇಕು
ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದನ್ನು ಸರ್ಕಾರಕ್ಕೆ ಮನವಿ ಮಾಡಿಕೊಡಲಾಗಿದೆ.
ಗ್ರೀನ್, ಯೆಲ್ಲೊ,
ಆರೆಂಜ್ ಹಾಗೂ ರೆಡ್ ಅಲರ್ಟ್ ಲೆವೆಲ್ ಮೀರಿದರೆ ಮತ್ತೆ ಲಾಕ್‍ಡೌನ್ ಮಾಡಬೇಕು
ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.
ಗ್ರೀನ್ ಅಲರ್ಟ್ ಎಂದರೆ 250ಕ್ಕಿಂತ ಕಡಿಮೆ ಪ್ರಕರಣಗಳ
ದಾಖಲಾಗುವ ಲೋ ರಿಸ್ಕ್ ಪರಿಸ್ಥಿತಿ, 250 ರಿಂದ 500ರರೊಳಗೆ ಪ್ರಕರಣಗಳು ದಾಖಲಾದರೆ ಅದನ್ನು ಯೆಲ್ಲೊ ಅಲರ್ಟ್ ಎಂದು ಗುರುತಿಸಲಾಗುವುದು.
ಅದೇ ರೀತಿ 500ರಿಂದ
ಒಂದು ಸಾವಿರದೊಳಗೆ ಪ್ರಕರಣಗಳು ದಾಖಲಾದರೆ ಅದನ್ನು ಆರೆಂಜ್ ಲೆವೆಲ್ ಎಂದು ಹಾಗೂ ಒಂದೇ ದಿನ ಒಂದು
ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾದರೆ ಅದನ್ನು ರೆಡ್ ಅಲರ್ಟ್ ಎಂದು ಪರಿಗಣಿಸಲಾಗುವುದು.
ಪರಿಸ್ಥಿತಿ ನಾಲ್ಕನೆ ಹಂತ ಕೈ ಮೀರಿದರೆ ಲಾಕ್‍ಡೌನ್ ಅನಿವಾರ್ಯ
ಎಂಬ ಸ್ಥಿತಿಯನ್ನು ಮತ್ತೆ ಎದುರಿಸಬೇಕಾಗುವುದು.ಸದ್ಯ ಬಿಬಿಎಂಪಿ ಎರಡನೆ ಹಂತ ಅಂದರೆ ಯೆಲ್ಲೊ
ಅಲರ್ಟ್ ವ್ಯಾಪ್ತಿಯಲ್ಲಿರುವುದರಿಂದ ಆತಂಕ ಪಡಬೇಕಿಲ್ಲ.
ಆದರೆ, ಹಬ್ಬ ಹರಿದಿನಗಳು
ಅಂತ ಜನ ಮೈಮರೆತು ಮಹಾಮಾರಿಯನ್ನು ಮೈಮೇಲೆ ಎಳೆದುಕೊಂಡರೆ ಮತ್ತೆ ಡೆಂಜರ್ ಜೋನ್ ತಲುಪುವ ಸಾಧ್ಯತೆ
ಇರುವುದರಿಂದ ಸಾರ್ವಜನಿಕ ಜೀವನದ ಮೇಲೆ ಕೆಲವು ಕಟ್ಟುನಿಟ್ಟಿನ ನಿರ್ಬಂಧ ಅನಿವಾರ್ಯ ಎಂದು
ಬಿಬಿಎಂಪಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.
No comments:
Post a Comment