ಚಿತ್ರದುರ್ಗ: ನಗರದ ಬಾಪೂಜಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಡಾ|| ವೈ. ಎ. ನಾರಾಯಣ ಸ್ವಾಮಿ ,ಎಂ. ಚಿದಾನಂದ ಗೌಡ ಹಾಗೂ ಸ್ನೇಹಿತರ ಬಳಗದ ವತಿಯಿಂದ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ಕೋವಿಡ್ -19 ರ ಆಹಾರ ಕಿಟ್ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ
ಮಾತನಾಡಿದ ಜಿ ಹೆಚ್ ತಿಪ್ಪಾರೆಡ್ಡಿ. ಶಾಲೆಗಳು ಪ್ರಾರಂಭವಾಗದೆ. ಗ್ರಾಮೀಣ ಭಾಗದಲ್ಲಿ ಬಾಲ್ಯ ವಿವಾಹ, ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದೆ.ಕೊರೋನಾದ
ಅಲೆಗಳು ನಿಲ್ಲುವ ಯಾವುದೇ, ಲಕ್ಷಣಗಳು ಕಾಣುತ್ತಿಲ್ಲ.ನಾವುಗಳು ಇದರೊಟ್ಟಿಗೆ ಬದುಕುವ ಕಲೆ ರೂಢಿಸಿಕೊಳ್ಳಬೇಕು.ಅನುದಾನರಹಿತ
ಶಿಕ್ಷಕರ ಗೋಳು ನೀಗಿಸುವಲ್ಲಿ, ಇದೊಂದು ಅಭೂತವೂರ್ವ
ಕಾರ್ಯ ಎಂದರು. ಅಲ್ಲದೆ, ಎಲ್ಲರೂ ತಪ್ಪದೇ ವ್ಯಾಕ್ಸಿನೇಷನ್. ಹಾಕಿಸಿಕೊಳ್ಳಿ.ಎಂದು ಹೇಳುತ್ತಾ, ಚಿತ್ರದುರ್ಗ
ಜಿಲ್ಲೆಗೆ, ಹೆಚ್ಚಿನ ಮಟ್ಟದಲ್ಲಿ ನೀರಾವರಿ ವಿಚಾರವಾಗಿ ಚೆಕ್ ಡ್ಯಾಂ ಗಳನ್ನು ಕಲ್ಪಿಸಿಕೊಡಿ ಎಂದು
ನೀರಾವರಿ ಸಚಿವರಾದ ಮಾಧುಸ್ವಾಮಿಯವರನ್ನು ಕೇಳಿಕೊಂಡರು.
ಕಾರ್ಯಕ್ರಮದ ರೂವಾರಿಗಳಾದ,
ವೈ ಎ ನಾರಾಯಣಸ್ವಾಮಿ ಮಾತನಾಡುತ್ತಾ. ಶಾಲೆಗಳು ತೆರೆಯಲೇಬೇಕು. ದೇಶ ಕಟ್ಟುವ ಕೈಂಕರ್ಯ ಹೊಣೆ ಹೊತ್ತ
ಶಿಕ್ಷಕರ ಜೀವನ ಹಸನಾಗಬೇಕು. ಶಿಕ್ಷಣ ಮೂಲಭೂತ ಕರ್ತವ್ಯ, ಶಿಕ್ಷಣೇ ಇಲ್ಲದ ರಾಷ್ಟ್ರಗಳಾದ ಪಾಕಿಸ್ತಾನ,
ಅಫ್ ಘಾನಿಸ್ತಾನ ಇಂತಹ ಕೆಲವು ರಾಷ್ಟ್ರಗಳು ನಶಿಸುವ
ಹಂತಕ್ಕೆ ತಲುಪಿವೆ.ಎಂದರು, ಅಲ್ಲದೇ ಸರ್ಕಾರ ನೀಡುತ್ತಿರುವ 5000 ಹಣ ನೇರವಾಗಿ ಖಾಸಗೀ ಶಾಲಾ ಶಿಕ್ಷಕರ
ಖಾತೆಗಳಿಗೆ ತಲುಪುವಂತೆ ನೋಡಿಕೊಳ್ಳುವ ಜವಾಬ್ದಾರಿ ಸಾರ್ವಜಿನಿಕ ಶಿಕ್ಷಣ ಇಲಾಖೆ, ವಹಿಸಿಕೊಳ್ಳಬೇಕು.
ಶಾಲೆ ಪ್ರಾರಂಭವಾಗುವ ಮೊದಲು, ಎಲ್ಲಾ ಶಿಕ್ಷಕರಿಗೆ/ಸಿಬ್ಬಂದಿಗೆ ಕಡ್ಡಾಯವಾಗಿ ವ್ಯಾಕ್ಸಿನೇಷನ್ ಹಾಕಿಸುವುದು.ಅಲ್ಲದೆ.
ಮಕ್ಕಳಿಗೆ ನೇಸಲ್ ವಾಕ್ಸಿನೇಷನ್ ಯಶಸ್ಸು ಕಂಡಿದ್ದು ಸದ್ಯದಲ್ಲೆ, ಮಕ್ಕಳಿಗೆ ಲಭ್ಯವಾಗಲಿದೆ, ಎಂದರು.
ರಾಜ್ಯದಲ್ಲಿ 27,500 ಅನುದಾನ
ರಹಿತ ಶಾಲೆಗಳಿದ್ದು, ಸರಿಸುಮಾರು 3 ಲಕ್ಷ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರೆಲ್ಲರ ಜೀವನ
ಕ್ಲಿಷ್ಟಕರವಾಗಿದೆ ಎಂದು ಕಾರ್ಯಕ್ರಮದ ಮತ್ತೊರ್ವ ರೂವಾರಿಗಳಾದ, ಎಮ್. ಚಿದಾನಂದಗೌಡ ಮಾತಾನಾಡುತ್ತಾ
ತಿಳಿಸಿದರು. ಕೆಲವು ಖಾಸಗೀ ಶಾಲಾ ಮಾಲೀಕರು ಕೇವಲ ಶಾಲೆಗೆ ಬೇಕಾದ ಇನ್ ಪ್ರಾಸ್ಟಕ್ಚರ್ ಗೆ ಮಾನ್ಯತೆ
ನೀಡಿ ನಿಜವಾದ ಆಧಾರ ಸ್ಥಂಭಗಳಾದ ಶಿಕ್ಷಕರ ಸೇವೆಯನ್ನು ಮರೆತು ಬೀದಿಗೆ ತಳ್ಳಿದ್ದಾರೆ. ಆದ್ದರಿಂದ,
ನಮ್ಮ ಕಾರ್ಯ 5 ಜಿಲ್ಲೆಗಳ 32 ತಾಲೂಕುಗಳಲ್ಲಿರುವ ಶಿಕ್ಷಕರಿಗೆ ನಮ್ಮ ಕಡೆಯಿಂದ ಒಂದು ಅಳಿಲು ಸೇವೆ
ಎಂದರು.
ಕಾರ್ಯಕ್ರಮದಲ್ಲಿ ಹನುಮಂತೇಗೌಡ್ರು,
ಬಿಜೆಪಿ ಯುವ ಮೊರ್ಚಾ ಅಧ್ಯಕ್ಷರು, ಚಂದ್ರಿಕ ಲೋಕ್ ನಾಥ್ ಬಿಜೆಪಿ ಯುವ ಮೊರ್ಚಾ ಉಪಾಧ್ಯಕ್ಷರು, ಜ್ಯೋತಿ
ದೇವೇಂದ್ರಪ್ಪ ಉಪಾಧ್ಯಕ್ಷರು, ಗ್ರಾಮ ಪಂಚಾಯಿತಿ, ಮದಕರಿಪುರ, ಬೇದ್ರೆ ಎನ್ ಮಂಜುನಾಥ್, ಪಿ ಎಮ್ ಜಿ
ರಾಜೇಶ್, ರಂಗನಾಯಕ್, ಗುರುಮೂರ್ತಿ,ಜಯಣ್ಣ, ನಿಜಲಿಂಗಪ್ಪ, ಶ್ರೀನಿವಾಸ್ ಗಣೇಶಯ್ಯ ಇತರರು ಇದ್ದರು.
Comments
Post a Comment