ಲಂಡನ್ :ಭಾರತದಲ್ಲಿ
ಅಪಾರ ಹಾನಿ ಸೃಷ್ಟಿಸಿರುವ ಡೆಲ್ಟಾ ರೂಪಾಂತರಿ ವೈರಸ್ ಇದೀಗ ವಿಶ್ವಾದ್ಯಂತ ಆತಂಕಕ್ಕೆ
ಕಾರಣವಾಗಿದೆ. ಹಲವು ದೇಶಗಳಲ್ಲಿ ಡೆಲ್ಟಾ ವೈರಸ್ ಪ್ರಕರಣಗಳು ಪತ್ತೆಯಾಗುತ್ತಿವೆ. ಇನ್ನೊಂದೆಡೆ ಈ
ಡೆಲ್ಟಾ ವೇರಿಯಂಟ್ ರೂಪಾಂತರಿಯಾಗಿ ಡೆಲ್ಟಾ ಪ್ಲಸ್ ಮೂಲಕ ಮತ್ತಷ್ಟು ಆತಂಕ ಹೆಚ್ಚಿಸಿದೆ.
ಏತನ್ಮಧ್ಯೆ ಮತ್ತೊಂದು ಕೊರೊನಾ ರೂಪಾಂತರಿ ಮೆಲ್ಲಗೆ ಕದತಟ್ಟಲಾರಂಭಿಸಿದೆ. ಕೊರೋನಾದ ಈ ವೇರಿಯಂಟ್
'ಲ್ಯಾಂಬ್ಡಾ
ವೇರಿಯಂಟ್ ಆಗಿದೆ. ಈ ವೇರಿಯಂಟ್ ಅನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಸಂಘಟನೆಗಳು ಇದನ್ನು 'ವೇರಿಯಂಟ್
ಆಫ್ ಕನ್ಸರ್ನ್' ಅಡಿ ವರ್ಗೀಕರಿಸಿವೆ.
ತುಂಬಾ
ವೇಗವಾಗಿ ತನ್ನ ಪಾದಚಾಚುತ್ತಿದೆ
ವಿಶ್ವ ಆರೋಗ್ಯ ಸಂಘಟನೆ ಈಗಾಗಲೇ 'ಲ್ಯಾಂಬ್ಡಾ
ವೇರಿಯಂಟ್' ಅನ್ನು 'ವೇರಿಯಂಟ್ ಆಫ್ ಕನ್ಸರ್ನ್' ಅಡಿ ಪಟ್ಟಿ ಮಾಡಿದೆ. ಜೂನ್ 15 ರಂದು
ಹೇಳಿಕೆ ಬಿಡುಗಡೆ ಮಾಡಿದ್ದ ವಿಶ್ವ ಆರೋಗ್ಯ ಸಂಘಟನೆ, ವಿಶ್ವದ
ಸುಮಾರು 29 ದೇಶಗಳಲ್ಲಿ ಲ್ಯಾಂಬ್ಡಾ ವೇರಿಯಂಟ್ ನಮೂನೆಗಳು ದೊರೆತಿವೆ
ಎಂದು ಹೇಳಿತ್ತು. ಇದು ದಕ್ಷಿಣ ಅಮೇರಿಕಾದಿಂದ ತನ್ನ ಪಯಣ ಆರಂಭಿಸಿದೆ ಎನ್ನಲಾಗಿದೆ. ಇದೀಗ
ದಕ್ಷಿಣ ಬ್ರೆಜಿಲ್ ಸೇರಿದಂತೆ
ಬ್ರಿಟನ್ ನಲ್ಲಿಯೂ ಕೂಡ ಲ್ಯಾಂಬ್ಡಾ ವೇರಿಯಂಟ್ ಪ್ರಕರಣಗಳು ಪತ್ತೆಯಾಗಿವೆ. ನ್ಯೂಸ್ ಮೆಡಿಕಲ್
ಲೈಫ್ ಸೈನ್ಸಸ್ ನಲ್ಲಿ
ಪ್ರಕಟಗೊಂಡ ಇತ್ತೀಚಿನ ವರದಿಯ ಪ್ರಕಾರ, ಕೊರೊನಾ ವೈರಸ್ ನ ಈ ರೂಪಾಂತರಿ
ಬ್ರಿಟನ್ ನಲ್ಲಿ ವೇಗವಾಗಿ ತನ್ನ ಪಾದ ಚಾಚುತ್ತಿದೆ ಎನ್ನಲಾಗಿದೆ. ಹಲವು ವರದಿಗಳ ಜೊತೆಗೆ
ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ ಕೂಡ ಈ ವೇರಿಯಂಟ್ ಕುರಿತು ಆತಂಕ ವ್ಯಕ್ತಪಡಿಸಿವೆ.
Comments
Post a Comment