ಬೆಂಗಳೂರು: ಕರ್ನಾಟಕದಲ್ಲಿ
ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 4,000ಕ್ಕಿಂತ
ಇಳಿಮುಖವಾಗಿದೆ. ರಾಜ್ಯದಲ್ಲಿ ಕೊವಿಡ್-19 ಹೊಸ ಪ್ರಕರಣಗಳ ಶೇಕಡಾವಾರು
ಪ್ರಮಾಣ 2.54ರಷ್ಟಿದ್ದು, ಸಾವಿನ ಪ್ರಮಾಣ
ಶೇ.2.88ರಷ್ಟಿದೆ.
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ
3222 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ
ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 93 ಮಂದಿ ಪ್ರಾಣ
ಬಿಟ್ಟಿದ್ದು, 14724 ಸೋಂಕಿತರು ಗುಣಮುಖರಾಗಿದ್ದಾರೆ.
ಮಂಗಳವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ
ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 28,40,428ಕ್ಕೆ ಏರಿಕೆಯಾಗಿದೆ. ಈವರೆಗೂ 27,19,479 ಸೋಂಕಿತರು ಗುಣಮುಖರಾಗಿದ್ದು. 34929
ಮಂದಿ ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ 85,997 ಕೊವಿಡ್-19
ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಮಾಹಿತಿ ನೀಡಿದೆ.
ಜಿಲ್ಲಾವಾರು
ಕೊರೊನಾವೈರಸ್ ಸೋಂಕಿತರ ಸಂಖ್ಯೆ
ರಾಜ್ಯದಲ್ಲಿ ಒಟ್ಟು 3222 ಮಂದಿಗೆ
ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 8, ಬಳ್ಳಾರಿ 18,
ಬೆಳಗಾವಿ 114, ಬೆಂಗಳೂರು ಗ್ರಾಮಾಂತರ 48, ಬೆಂಗಳೂರು 753, ಬೀದರ್ 2, ಚಾಮರಾಜನಗರ
50, ಚಿಕ್ಕಬಳ್ಳಾಪುರ 25, ಚಿಕ್ಕಮಗಳೂರು 114,
ಚಿತ್ರದುರ್ಗ 44, ದಕ್ಷಿಣ ಕನ್ನಡ 385, ದಾವಣಗೆರೆ 95, ಧಾರವಾಡ 30, ಗದಗ 26,
ಹಾಸನ 242, ಹಾವೇರಿ 10, ಕಲಬುರಗಿ
36, ಕೊಡಗು 130, ಕೋಲಾರ 105, ಕೊಪ್ಪಳ 20, ಮಂಡ್ಯ 89, ಮೈಸೂರು 415,
ರಾಯಚೂರು 7, ರಾಮನಗರ 16, ಶಿವಮೊಗ್ಗ
225, ತುಮಕೂರು 99, ಉಡುಪಿ 83, ಉತ್ತರ ಕನ್ನಡ 25, ವಿಜಯಪುರ 6, ಯಾದಗಿರಿ
2 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.
Comments
Post a Comment