Ø ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲೀಯರ್ ಮೆಡಿಸಿನ್ ಅಂಡ್ ಅಪ್ಲೈಡ್ ಸೈನ್ಸಸ್ , ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಜೇಷನ್ ಹಾಗೂ ಡಾ. ರೆಡ್ಡಿಸ್ ಲ್ಯಾಬ್ ಗಳು ಜಂಟಿಯಾಗಿ ಈ ಔಷಧಿಯನ್ನುಅಭಿವೃದ್ಧಿಪಡಿಸಿವೆ.
Ø ಈ ಔಷಧಿಯ ಒಂದು ಸ್ಯಾಚೆಟ್ ಬೆಲೆ ರೂ.990 ನಿಗದಿಪಡಿಸಲಾಗಿದೆ. ಆದರೆ, ಸರ್ಕಾರಿ ಆಸ್ಪತ್ರೆಗಳಿಗೆ ಇದನ್ನು ಕಡಿಮೆ ಬೆಲೆಯಲ್ಲಿ ಪೂರೈಸಲಾಗುತ್ತಿದೆ.
ನವದೆಹಲಿ:ಆಸ್ಪತ್ರೆಗಳಲ್ಲಿ
ದಾಖಲಾದ ಕೊರೊನಾ ರೋಗಿಗಳಿಗೆ 2-DG(2-ಡಿ-ಆಕ್ಸಿ-ಡಿ-ಗ್ಲುಕೋಸ್) ಕೊರೊನಾ ಔಷಧಿಯನ್ನು
ವಾಣಿಜ್ಯಾತ್ಮಕವಾಗಿ ಬಿಡುಗಡೆ ಮಾಡಲಾಗಿದೆ ಎಂದು ಹೈದರಾಬಾದ್ ಮೂಲದ ಡಾ. ರೆಡ್ಡಿಸ್ ಲ್ಯಾಬ್
ಘೋಷಿಸಿದೆ. ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲೀಯರ್ ಮೆಡಿಸಿನ್ ಅಂಡ್ ಅಪ್ಲೈಡ್ ಸೈನ್ಸಸ್ , ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಜೇಷನ್ ಹಾಗೂ ಡಾ. ರೆಡ್ಡಿಸ್ ಲ್ಯಾಬ್ ಗಳು ಜಂಟಿಯಾಗಿ ಈ ಔಷಧಿಯನ್ನುಅಭಿವೃದ್ಧಿಪಡಿಸಿವೆ. ಈ
ಔಷಧಿಯನ್ನು ದೇಶಾದ್ಯಂತ ಇರುವ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಪೂರೈಸಲಾಗುವುದು. ಈ
ಕುರಿತು ಕಂಪನಿ ಹೊರಡಿಸಿರುವ ಒಂದು ಹೇಳಿಕೆಯ ಪ್ರಕಾರ ಮೊದಲು ಈ ಔಷಧಿಯನ್ನು ಮೆಟ್ರೋ ನಗರಗಳಿಗೆ ಪೂರೈಕೆ ಮಾಡಲಾಗುವುದು ಎನ್ನಲಾಗಿದೆ. ಈ ಔಷಧಿಯ ಒಂದು ಸ್ಯಾಚೆಟ್ ಬೆಲೆ ರೂ.990
ನಿಗದಿಪಡಿಸಲಾಗಿದೆ. ಆದರೆ, ಸರ್ಕಾರಿ ಆಸ್ಪತ್ರೆಗಳಿಗೆ
ಇದನ್ನು ಕಡಿಮೆ ಬೆಲೆಯಲ್ಲಿ ಪೂರೈಸಲಾಗುತ್ತಿದೆ.
ಕಳೆದ
ತಿಂಗಳಷ್ಟೇ ಈ ಔಷಧಿಗೆ, ಔಷಧ
ನಿಯಂತ್ರಕದ ಅನುಮತಿ ದೊರೆತಿದೆ.
ಈ ಔಷಧಿಯನ್ನು 2 ಡಿಜಿಟಿಎಂ ಬ್ರಾಂಡ್ ಹೆಸರಿನಲ್ಲಿ
ಮಾರಾಟ ಮಾಡಲಾಗುವುದು. ಈ ಔಷಧದ ಶುದ್ಧತೆಯು ಶೇಕಡಾ 99.5 ಎಂದು
ಕಂಪನಿ ಹೇಳಿಕೊಂಡಿದೆ. ಕರೋನಾ ವೈರಸ್ ವಿರುದ್ಧ ಹೋರಾಡಲು ತಯಾರಿಸಲಾಗಿರುವ ಈ ಔಷಧಿಗೆ ಔಷಧ
ನಿಯಂತ್ರಕ (ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ) 1 ಮೇ 2021 ರಂದು ಅಂಗೀಕರಿಸಿತು. ಆದರೆ, ಈ ಔಷಧಿಯನ್ನು ಅರ್ಹ ವೈದ್ಯರ ಮೇಲ್ವಿಚಾರಣೆಯಲ್ಲಿ ಮಧ್ಯಮದಿಂದ ತೀವ್ರವಾದ ಸೋಂಕುಗಳ
ಚಿಕಿತ್ಸೆಗೆ ಹೆಚ್ಚುವರಿ ಚಿಕಿತ್ಸೆಯಾಗಿ ಮಾತ್ರ ಬಳಸಬಹುದು. ಡಾ. ರೆಡ್ಡಿ ಅಧ್ಯಕ್ಷ ಸತೀಶ್
ರೆಡ್ಡಿ ಅವರ ಪ್ರಕಾರ, ಕಂಪನಿಯು ಕೋವಿಡ್ -19 ಚಿಕಿತ್ಸಾ ಪೋರ್ಟ್ಫೋಲಿಯೊಗೆ ಮತ್ತೊಂದು ಉತ್ಪನ್ನವನ್ನು ಸೇರಿಸಿದೆ ಎಂದಿದ್ದಾರೆ.
ಈ ಹಿಂದೆ, ರಷ್ಯಾದ ಸ್ಪುಟ್ನಿಕ್ -ವಿ ಲಸಿಕೆ ವಿತರಣೆಗಾಗಿ ಕಂಪನಿಯು ಸ್ನೋಮ್ಯಾನ್
ಲಾಜಿಸ್ಟಿಕ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.
2DG ಹೇಗೆ
ಕಾರ್ಯನಿರ್ವಹಿಸುತ್ತದೆ.
ಗ್ಲೂಕೋಸ್‌ನ ಗುಣ ಲಕ್ಷಣಗಳನ್ನು ಹೊಂದಿರುವ ಜೆನೆರಿಕ್
ಅಣುವಾಗಿ 2-ಡಿಜಿ ತಯಾರಿಸಲಾಗಿದೆ. ಈ ಔಷಧ ದೇಹದಲ್ಲಿನ ಕೊರೊನಾ ವೈರಸ್ ಸೋಂಕಿತ ಕೋಶವನ್ನು ಪ್ರವೇಶಿಸುತ್ತದೆ ಮತ್ತು ನಂತರ ಆ ವೈರಸ್ ಅನ್ನು ಇತರ ಕೋಶಗಳ
ಮೇಲೆ ಆಕ್ರಮಣ ಮಾಡದಂತೆ ತಡೆಯುತ್ತದೆ. ಈ ಔಷಧವು ವೈರಸ್ನ ವೈರಸ್ ಸಂಶ್ಲೇಷಣೆ ಮತ್ತು
ಶಕ್ತಿಯ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ, ಇದರಿಂದ ಅದು ವೇಗವಾಗಿ
ಬೆಳೆಯುವುದಿಲ್ಲ ಮತ್ತು ಕರೋನಾ ಸೊಂಕಿತರಿಗೆ ಆಕ್ಸಿಜನ್ ಕೊರತೆ ಎದುರಾಗುವುದಿಲ್ಲ ಹಾಗೂ ರೋಗಿಗಳು
ಶೀಘ್ರವಾಗಿ ಚೇತರಿಸಿಕೊಳ್ಳುತ್ತಾರೆ.
2020ರಲ್ಲಿ ಒಟ್ಟು ಆರು ಆಸ್ಪತ್ರೆಗಳ ಸುಮಾರು 110 ಕೊರೋನಾ ರೋಗಿಗಳ ಮೇಲೆ ಮೇ ಮತ್ತು ಅಕ್ಟೋಬರ್ ತಿಂಗಳಿನ ನಡುವೆ ಈ ಔಷಧಿಯ ಆರಂಭಿಕ ಪ್ರಯೋಗ
ನಡೆಸಲಾಗಿದೆ. ಬಳಿಕ ಮಾರ್ಚ್ 2021ರಲ್ಲಿ ಸುಮಾರು 27 ಕೊವಿಡ್ ಆಸ್ಪತ್ರೆಗಳ 220 ರೋಗಿಗಳ ಮೇಲೆ ಈ ಔಷಧಿಯ ಅಂತಿಮ
ಹಂತದ ಪರೀಕ್ಸೆ ಕೈಗೊಳ್ಳಲಾಗಿದೆ. ಈ ಪರೀಕ್ಷೆಗಳಿಂದ ದೊರೆತ ಫಲಿತಾಂಶಗಳ ಪ್ರಕಾರ ಈ ಔಷಧಿ ಒಂದು
ಸುರಕ್ಷಿತ ಔಷಧಿಯಾಗಿದ್ದು, ರೋಗಿಗಳು ಇದರಿಂದ ಬೇಗನೆ
ಚೇತರಿಸಿಕೊಳ್ಳುತ್ತಾರೆ ಎಂಬುದು ತಿಳಿದುಬಂದಿದೆ.
Comments
Post a Comment