ಬೆಂಗಳೂರು: ರಾಜ್ಯದಲ್ಲಿ ಶಾಲೆ ಪುನರಾರಂಭದ ಬಗ್ಗೆ ಟಾಸ್ಕ್
ಫೋರ್ಸ್ ಸಮಿತಿ ರಚಿಸಲಾಗುತ್ತಿದ್ದು, ಸಮಿತಿ ಸಲಹೆಯಂತೆ ಶಾಲೆ ಆರಂಭದ
ಬಗ್ಗೆ ಶೀಘ್ರದಲ್ಲಿ ನಿರ್ಧರಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಜುಲೈ 1ರಿಂದ ಚಂದನ ವಾಹಿನಿಯಲ್ಲಿ
ಪಾಠ ಆರಂಭವಾಗಲಿದೆ. ಕನ್ನಡ ಆಂಗ್ಲ ಮಾಧ್ಯಮಗಳಲ್ಲಿ ಪಾಠ ನಡೆಯಲಿದ್ದು, ದೀಕ್ಷಾ
ಪೋರ್ಟಲ್ ನಲ್ಲಿ ಪಾಠಗಳ ವಿಡಿಯೋ ಲಭ್ಯವಿದೆ ಎಂದರು.
ಮಕ್ಕಳಿಗಾಗಿ ಮಕ್ಕಳ ವಾಹಿನಿ ಆರಂಭವಾಗಿದ್ದು, ಯೂಟ್ಯೂಬ್ ನಲ್ಲಿಯೂ ವಿಡಿಯೋಗಳು ಇವೆ. ಸಿ ಬಿ ಎಸ್ ಇ
ಮಾದರಿಯಲ್ಲಿ ನಿರಂತರ ಮೌಲ್ಯಾಂಕದ ಬಗ್ಗೆಯೂ ಚರ್ಚೆ ನಡೆದಿವೆ. ಮಕ್ಕಳಿಗೆ ಆನ್ ಲೈನ್ ಕ್ಲಾಸ್
ಸಿಗದಿದ್ದರೆ ರೆಕಾರ್ಡ್ ಮಾಡಿ ಪಾಠ ಕೇಳುವ ಸೌಲಭ್ಯ ಒದಗಿಸಲಾಗುವುದು ಎಂದು ಹೇಳಿದರು.
Comments
Post a Comment