Skip to main content

Posts

Showing posts from September, 2021

ಮೆದೇಹಳ್ಳಿ ಶಾಲಾ ಪ್ರಾರಂಭೋತ್ಸವ ಸಮಾರಂಭ.

  ಚಿತ್ರದುರ್ಗ : ಉನ್ನತಿಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೆದೇಹಳ್ಳಿ ಚಿತ್ರದುರ್ಗ ತಾ ಲೂಕಿನ ಶಾಲೆಯಲ್ಲಿ,   ‘ ಶಾಲಾ ಪ್ರಾರಂಭೋತ್ಸವ ಸಮಾರಂಭ 'ವನ್ನು ಹಮ್ಮಿಕೊಳ್ಳಲಾಗಿತ್ತು.   ಸುಮಾರು ತಿಂಗಳುಗಳ ನಂತರ ಸಂತಸದಿಂದ ಆಗಮಿಸಿದ ಮಕ್ಕಳನ್ನು. ಶಿಕ್ಷಕರು, SDMC ಸದಸ್ಯರು, ಊರಿನ ಮುಖಂಡರು. ಮಕ್ಕಳಿಗೆ ಹೂ ವೃಷ್ಠಿ ಸುರಿಸುವುದರ ಮೂಲಕ ಸ್ವಾಗತಿಸಲಾಯ್ತು. ಶಾಲಗೆ ಆಗಮಿಸಿ ಮಕ್ಕಳಿಗೆ 21- 22 ನೇ ಸಾಲಿನ ಉಚಿತ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು.   ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ಡಿ ಎಮ್.ಸಿ ಅಧ್ಯಕ್ಷ ಶ್ರೀ ಮಾರೇಶ್   ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀನಿವಾಸ್ ಮತ್ತು SDMC ಸದಸ್ಯರಾದ ಶ್ರೀ ದೇವರಾಜ್ , CRP ಜಲಜಾಕ್ಷಿ , ಬಡ್ತಿ ಮುಖ್ಯ ಶಿಕ್ಷಕ ಶ್ರೀ ಟಿ. ಷಣ್ಮುಖಪ್ಪ ' ಶಿಕ್ಷಕರಾದ ಅಜ್ಜಪ್ಪ. ಜಿ. ಎನ್. . ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ನವೀನ್ ಪಿ. ಮುಂತಾದ ಶಿಕ್ಷಕರಿದ್ದರು.   ಎ. ಸಾವಿತ್ರಮ್ಮ ಪ್ರಾರ್ಥಿಸಿದರು,   ಜಿ.ಎನ್. ಅಜ್ಜಪ್ಪ ಸ್ವಾಗತಿಸಿದರು , ನವೀನ್ .ಪಿ. ನಿರೂಪಿಸಿದರು, ಹೆಚ್. ಬಿ. ಜಯಮಾಲಾ ವಂದಿಸಿದರು.

ಗಂಡು ಮಕ್ಕಳಿಗೂ ಸಂಸ್ಕಾರ ಅಗತ್ಯ: ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನೀಕೇರಿ.

  ನಾಯಕನಹಟ್ಟಿ: ಗಂಡು ಮಕ್ಕಳಿಗೆ ಸಂಸ್ಕಾರ ಕಲಿಸುವುದು ಅಗತ್ಯ ಎಂದು ಜಿಲ್ಲಾಧಿಕಾರಿ ಕವಿ ತಾ ಎಸ್ ಮನ್ನೀಕೇರಿ ಹೇಳಿದ ರು. ಅವರು ಶನಿವಾರ ಸಮೀಪದ ತೊರೆಕೋಲಮ್ಮನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ , ‘ ಸಮಸ್ಯೆ ಮುಕ್ತ ಗ್ರಾಮದ ಕಡೆಗೊಂದು ಹೆಜ್ಜೆ ಕಾರ್ಯಕ್ರಮ ’ ದ ಅಂಗವಾದ ಗ್ರಾಮ ಸಭೆಯಲ್ಲಿ ಮಾತನಾಡಿದರು .   ಜಿಲ್ಲೆ ಹಾಗೂ ರಾಜ್ಯದಲ್ಲಿ ಗಂಡು ಮಕ್ಕಳು ಪೋಷಕರು ತಲೆತಗ್ಗಿಸುವ ಪ್ರಕರಣಗಳು ದಿನೆ ದಿನೇ ಹೆಚ್ಚುತ್ತಿವೆ .   ಇತ್ತೀಚೆಗೆ ಭ ರಮಸಾಗರ ಗ್ರಾಮದಲ್ಲಿ ನಡೆದ ಅತ್ಯಾಚಾರ ಪ್ರಕರಣ , ಗಂಡುಮಕ್ಕಳು ಹೆತ್ತವರನ್ನು ಯೋಚಿಸುವಂತಾಗಿದೆ . ಒಂದು ಕಾಲದಲ್ಲಿ ಹೆಣ್ಣುಮಕ್ಕಳು ಜಾಗೃತರಾಗಿರಿ ಎಂದು ಹೇಳಲಾಗುತ್ತಿತ್ತು ಹೆಣ್ಣುಮಕ್ಕಳಿಗೆ ಮಾತ್ರ ಬುದ್ಧಿವಾದ ಸಂಸ್ಕಾರವನ್ನು ಪೋಷಕರು ನೀಡುತ್ತಿದ್ದರು . ಆದರೆ ಇದೀಗ ಗಂಡು ಮಕ್ಕಳಿಗೆ ನೀತಿ ಪಾಠ ಹೇಳಬೇಕಾದ ಅನಿವಾರ್ಯತೆ ಇದೆ . ಹೆಣ್ಣುಮಕ್ಕಳಿಗೆ ಗೌರವ ನೀಡುವ ಉತ್ತಮ ನಡವಳಿಕೆ ರೂಪಿಸಿಕೊಳ್ಳುವ ಸಂಸ್ಕಾರ ನೀಡುವುದು ಅಗತ್ಯವಾಗಿದೆ . ಕುಟುಂಬದಲ್ಲಿರುವ ಗಂಡು ಮಕ್ಕಳಿಗೆ ಸಂಸ್ಕಾರ ಕಲಿಸುವುದು ಇಂದಿನ ಆದ್ಯತೆಯಾಗಬೇಕು .   ನಾನು ಎರಡು   ಗಂಡುಮಕ್ಕಳ ತಾಯಿಯಾಗಿ, ಪ್ರತಿದಿನ ಮನೆಗೆ ತೆರಳಿದ ನಂತರ ಅವರಿಗೆ ನೀತಿ ಹಾಗೂ ಸಂಸ್ಕಾರವನ್ನು ಹೇಳುತ್ತಿದ್ದೇನೆ , ಐಎಎಸ್ , ಐಪಿಎಸ್ ,   ಆಗುವುದಕ್ಕಿಂತ ಮುಂಚೆ ಉತ್ತಮ ಸಂಸ್ಕಾರವಂತ ಮಕ್ಕಳನ್ನು ನೀಡುವುದ...