ಮಧ್ಯಪ್ರದೇಶದಲ್ಲಿ ಖಾಸಗಿ ಶಾಲೆಗೆ ನೋಟಿಸ್: ಪ್ರಶ್ನೆಪತ್ರಿಕೆಯಲ್ಲಿ `ಕರೀನಾ ಸೈಫ್ ಅಲಿಖಾನ್ ಇವರ ಮಗನ ಪೂರ್ಣ ಹೆಸರು ಏನು ?
ನಿಮಾರ (ಮಧ್ಯಪ್ರದೇಶ) - ಖಾಂಡವಾ ನಗರದಲ್ಲಿನ ' ಅಕೆಡಮಿಕ್ ಹೈಟ್ಸ್ ಪಬ್ಲಿಕ್ ಸ್ಕೂಲ್ ' ನ ಪ್ರಶ್ನೆಪತ್ರಿಕೆಯಲ್ಲಿ ' ಕರೀನಾ ಕಪೂರ ಮತ್ತು ಸೈಫ್ ಅಲಿ ಖಾನ್ ಇವರ ಮಗನ ಹೆಸರೇನು ?' ಎಂದು ಪ್ರಶ್ನೆ ಕೇಳಲಾಗಿತ್ತು. ಈ ಬಗ್ಗೆ ಟೀಕೆ ವ್ಯಕ್ತವಾದಾಗ ಶಾಲೆಗೆ ಕಾರಣ ತೋರಿಸಿ ಎಂಬ ನೋಟಿಸ್ ಜಾರಿ ಮಾಡಲಾಗಿದೆ. ಜೊತೆಗೆ ಶಾಲೆಯ ಶಿಕ್ಷಣ ವಿಭಾಗವು ಕ್ರಮ ಕೈಗೊಂಡಿರುವುದಾಗಿ ಹೇಳಲಾಗಿದೆ. ಅಕೆಡಮಿಕ್ ಹೈಟ್ಸ್ ಪಬ್ಲಿಕ್ ಸ್ಕೂಲ್ ಆರನೇ ತರಗತಿಯ ಮಕ್ಕಳಿಗೆ ಪರೀಕ್ಷೆಯಲ್ಲಿ ಈ ಪ್ರಶ್ನೆ ವಿಚಾರಿಸಿತ್ತು. ಶಾಲೆಯ ಈ ಪ್ರಶ್ನೆಗೆ ಪಾಲಕ ಶಿಕ್ಷಕ ಸಂಘವು ತೀವ್ರ ಪ್ರತಿಕ್ರಿಯೆ ನೀಡಿದೆ , ' ಶಾಲೆಗೆ ಪ್ರಶ್ನೆ ಕೇಳುವುದಿದ್ದರೆ , ಮಹಾಪುರುಷರ ವಿಷಯವಾಗಿ ಕೇಳಬಹುದಾಗಿತ್ತು ', ಎಂದು ಹೇಳಿದೆ.