Skip to main content

Posts

Showing posts from June, 2022

ಬಿಸಿಸಿಐಗೆ ಐಪಿಎಲ್‌ ಜಾಕ್‌ ಪಾಟ್

ಮುಂಬಯಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) ಬಿಸಿಸಿಐ ಪಾಲಿನ ಚಿನ್ನದ ಮೊಟ್ಟೆಯಿಡುವ ದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಭಾನುವಾರ ಆರಂಭಗೊಂಡಿದ್ದ 202300 27ರವರೆಗಿನ ಐದು ಆವೃತ್ತಿಗಳ ಐಪಿಎಲ್ ಪಂದ್ಯಗಳ ನೇರ ಪ್ರಸಾರದ ಇ- ಹಕ್ಕಿನ ಹರಾಜು ಪ್ರಕ್ರಿಯೆ ಮಂಗಳವಾರ ಮುಕ್ತಾಯಗೊಂಡಿದ್ದು ಒಟ್ಟು 48,390 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಇದು ವೃತ್ತಿಪರ ಕ್ರಿಕೆಟ್ ಇತಿಹಾಸದಲ್ಲಿಯೇ ದಾಖಲೆಯ ಗಳಿಕೆ, ಡಿಜಿಟಲ್ ಪ್ರಸಾರದ (23,758 ಕೋಟಿ ರೂಪಾಯಿ) ಹಕ್ಕುಗಳು ದರ ಟಿವಿ ನೇರ ಪ್ರಸಾರದ ಮೌಲ್ಯವನ್ನು (20,500 ಕೋಟಿ ರೂಪಾಯಿ) ಮೀರಿಸಿರುವುದು ಹೊಸ ಬೆಳವಣಿಗೆ. ವರ್ಷಕ್ಕೆ 14 ಪಂದ್ಯಗಳಂತೆ ಐದು ಆವೃತ್ತಿಗಳ ಒಟ್ಟಾರೆ 410 ಪಂದ್ಯಗಳ ನೇರ ಪ್ರಸಾರದ ಹಕ್ಕಿಗಾಗಿ ಬಿಡ್ ನಡೆಯಿತು. ಕೊನೆಯ 2 ಆವೃತ್ತಿಗಳಲ್ಲಿ ತಲಾ 94 ಪಂದ್ಯಗಳನ್ನು ಆಯೋಜಿಸುವ ಸಾಧ್ಯತೆಗಳೂ ಇದರಲ್ಲಿ ಒಳಗೊಂಡಿದೆ.