Skip to main content

Posts

Showing posts from May, 2022

ವಿಮಾನದ ಬಾಗಿಲು ತೆರೆದು ರೆಕ್ಕೆ ಮೇಲೆ ನಡೆದ ಪ್ರಯಾಣಿಕ!!

  ಅಮೇರಿಕಾದ ಚಿಕಾಗೋದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ವಿಮಾನ ಇಳಿಯುವಾಗ ಪ್ರಯಾಣಿಕನೊಬ್ಬ ತುರ್ತು ಬಾಗಿಲು ತೆರೆದು ಅದರ ರೆಕ್ಕೆ ಮೇಲೆ ಹತ್ತಿದ್ದಾರೆ. ಈತ ಕ್ಯಾಲಿಫೋರ್ನಿಯಾ ಮೂಲದ ಪ್ರಯಾಣಿಕರಾದ ರಾಂಡಿ ಫ್ರಾಂಕ್ ಡವಿಲ್(57) ರನ್ನು   ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಗಳು ತಿಳಿಸಿವೆ. ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾಂಟಿಯಾಗೊ ವಿಮಾನ ನಿಲ್ದಾಣದಿಂದ ಯುನೈಟೆಡ್ ಏರ್ಲೈನ್ಸ್ ವಿಮಾನವು ಚಿಕಾಗೋ ವಿಮಾನ ನಿಲ್ದಾಣಕ್ಕೆ ಬಂದು ಇಳಿಯುತ್ತಿತ್ತು, ಈ ವೇಳೆ ಪ್ರಯಾಣಿಕ ವಿಮಾನದ ತುರ್ತು ಬಾಗಿಲು ತೆರೆದು ರೆಕ್ಕೆಯ ಮೇಲೆ ಸತ್ತಿದ್ದಾರೆ ಎಂದು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಸಾಪದ 108ನೇ ಸಂಸ್ಥಾಪನಾ ದಿನಾಚರಣೆ.

  ಚಿತ್ರದುರ್ಗ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಕಸಾಪದ 108 ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾ ಡಿದ ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಶ್ರೀ ಹೆಚ್ . ಮಂಜುನಾಥ್ ‌. ಕನ್ನಡ ಕೇವಲ ಒಂದು ಭಾಷೆಯಾಗಿರದೇ ಜೀವನ ವಿಧಾನವಾಗಬೇಕು ಎಂದು ನಾವು ಕನ್ನಡವನ್ನು ಕೇವಲ ಭಾಷೆಯಾಗಿ ನೋಡದೆ ಜೀವನದ ಅವಿಭಾಜ್ಯ ಅಂಗವಾಗಿ ನೋಡಬೇಕಿದೆ ಎಂದು ಅಭಿಪ್ರಾಯಪಟ್ಟರು . ಯಾವುದೇ ಭಾಷೆಯ ಉಳಿವು ಅಳಿವು   ಆ ಭಾಷೆಯನ್ನು ಪ್ರೀತಿಸುವ ಜನಸಂಖ್ಯೆಯನ್ನು ಆಧರಿಸಿರುತ್ತದೆ ಎಂದರು .  ಕನ್ನಡವನ್ನು ಉಳಿಸಿ ಎಂದು ಹೇಳುವ ಬದಲು , ತಾಯಿಭಾಷೆಯನ್ನು ಎಲ್ಲರೂ ಪ್ರೀತಿಸಿ ಉಳಿಸುವ ಜವಾಬ್ದಾರಿ ಹೊರಬೇಕಾಗಿದೆ ಎಂದರು .         ಸಾಹಿತಿ ಶ್ರೀಮತಿ ಗೀತಾ ಭರಮಸಾಗರ ಅವರು ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ‌, ಸರ್ ‌ ಎಂ . ವಿಶ್ವೇಶ್ವರಯ್ಯ ಹಾಗೂ ಸರ್ ‌ ಮಿರ್ಜಾ ಇಸ್ಮಾಯಿಲ್ ‌ ಅವರ ಕೊಡುಗೆಯನ್ನು ಸ್ಮರಿಸಿದರು . ಕನ್ನಡ ಸಾಹಿತ್ಯ ಪರಿಷತ್ತು 1915 ರಲ್ಲಿ ಸ್ಥಾಪಿತವಾಗಿದ್ದರಿಂದಲೇ ಇಂದಿಗೂ ಕನ್ನಡ ಭಾಷೆಯ ಮತ್ತು ಭಾಷಿಕರ ಅಸ್ಮಿತೆಯನ್ನು ಕಾಪಾಡುವ ಅಧಿಕೃತ ಸಂಸ್ಥೆಯಾಗಿ ಬೆಳೆದಿದೆ . ಕನ್ನಡಿಗರ ಮನೋಬಲ ವೃದ್ಧಿಗೊಳಿಸುವ ...